ಗೆಳೆಯರೇ, ಇದೇ ವರ್ಷ ನವೆಂಬರ್ 22 -23 ಕ್ಕೆ ನೆಡೆಯಲಿರುವ ನಮ್ಮ ಶಾಲೆಯ ಬೆಳ್ಳಿಹಬ್ಬ (25 ನೇ ವರ್ಷಾಚರಣೆ ) ಸಮಾರಂಭಕ್ಕೆ ಹಳೆವಿದ್ಯರ್ಥಿಗಳಿಂದ ವಿವಿಧ ಲೇಖನ, ಮಾಹಿತಿ, ಹಾಗು ಫೋಟೋ ಗಳ್ಳನ್ನು ಒಳಗೊಂಡ ಪುಸ್ತಕ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ . ಈ ಪುಸ್ತಕ್ಕಗಿ ಎಲ್ಲ ಹಳೆಯ ವಿದ್ಯಾರ್ಥಿಗಳಿಂದ ಕಥೆ, ಕವನ, ಲೇಖನ ಹಾಗು ನಿಮ್ಮ ನೆಚ್ಚಿನ ಗುರುಗಳ ಬಗ್ಗೆ ವ್ಯಕ್ತಿಚಿತ್ರ ಗಳನ್ನೂ ಆಹ್ವಾನಿಸಲಾಗಿದೆ. ಸಂಪಾದಕ ಮಂಡಳಿಯಿಂದ ಅಂತಿಮಗೊಂಡ ಬರಹಗಳನ್ನು ಪುಸ್ತಕದಲ್ಲಿ ಪ್ರಕಟಿಸಲಾಗುವುದು.
ಕಥೆ, ಕವನ, ಲೇಖನ ಕಳಿಹಿಸಲು ಅಂತಿಮ ದಿನಾಂಕ 26 ಅಕ್ಟೋಬರ್ 2019
ಹೆಚ್ಚಿನ ಮಾಹಿತಿ ಯನ್ನು ಹೊಳೆಕೊಪ್ಪ weblink bit.ly/2lxS7GF ಮತ್ತು fbಗ್ರೂಪ್ ನಲ್ಲಿ ಹಾಕಲಾಗುತ್ತದೆ
ಪ್ರಕಟಣೆ: 29 09 2019 GHSHನ ಎಲ್ಲ ಹಳೆಯ ವಿದ್ಯಾರ್ಥಿಗಳಿಗೆ.
ಗೆಳೆಯರೇ ಇದೇ ವರ್ಷ ನವೆಂಬರ್ 22 -23 ಕ್ಕೆ ನೆಡೆಯುವ 25 ನೇ ವರ್ಷಾಚರಣೆ ಸಮಾರಂಭಕ್ಕೆ ಪೂರ್ವ ಸಿದ್ಧತೆಗಾಗಿ ಹಳೆ ವಿದ್ಯಾರ್ಥಿಗಳ ಸಭೆಯನ್ನು ಅಕ್ಟೋಬರ್ 6 ಭಾನುವಾರ 2 :30 ಕ್ಕೆ ಕರೆಯಲಾಗಿದ್ದು.ಎಲ್ಲ ಹಳೆಯ ವಿದಾರ್ಥಿಗಳು ಭಾಗವಹಿಸ ಬೇಕಾಗಿ ವಿನಂತಿ. ಹಾಗು ನವೆಂಬರ್ 22 ರ ಸಾಂಸ್ಕೃತಿಕ ಕಾರ್ಯಕ್ರಮ ಕೊಡುವ ಹಳೆ ವಿದಾರ್ಥಿಗಳು ಕಾರ್ಯಕ್ರಮದ ವಿವರಗೊಳೊಂದಿಗೆ ಬರಬೇಕಾಗಿ ವಿನಂತಿ.
ಹಾಗು 25 ನೇ ವರ್ಷಾಚರಣೆಗೆ ಹಳೆವಿದ್ಯಾರ್ಥಿಗಳಿಂದ ಹೊರತರುತಿರುವ ಪುಸ್ತಕಕ್ಕೆ ಲೇಖನ, ಕವನ, ಕಥೆ ಮತ್ತು ವ್ಯಕ್ತಿ ಚಿತ್ರ ಗಳು ಇನ್ನು ತಲುಪಿಲ್ಲ. ಆದಷ್ಟು ಬೇಕಾ ತಲುಪಿಸಬೇಕಾಗಿ ವಿನಂತಿ. ಅಕ್ಟೋಬರ್ 28 ರ ನಂತರ ಬರುವ ಯಾವುದೇ ಲೇಖನ ಇತ್ಯಾದಿ ಗಳನ್ನೂ ಪ್ರಕಟಿಸಲು ಸಾಧ್ಯವಾಗುವುದಿಲ್ಲ. (ಸಮಯದ ಮಿತಿ ಇರುವುದರಿಂದ, ಸಹಕರಿಸ ಬೇಕು )
ಧನ್ಯವಾದ
"ದೀಪಾವಳಿ ಸಮ್ಮಿಲನ " ಪ್ರಿಯ ಗೆಳೆಯರೇ ಇದೇ ಬರುವ ಭಾನುವಾರ ಅಂದರೆ ದಿನಾಂಕ 27 ರಂದು ಬೆಳಿಗ್ಗೆ 10.00 ಕ್ಕೆ ಸರಿಯಾಗಿ ಎಲ್ಲಾ ಹಳೆವಿದ್ಯಾರ್ಥಿಗಳ ಜೊತೆ "ದೀಪಾವಳಿ ಸಮ್ಮಿಲನ " ಕಾರ್ಯಕ್ರಮ ನಡೆಸಲು ತೀರ್ಮಾನಿಸಲಾಗಿದೆ. ಆ ಕಾರ್ಯಕ್ರಮದಲ್ಲಿ ಒಂದಷ್ಟು ಹರಟೆ ದೀಪಾವಳಿ ಶುಭಾಶಯ, ವಿನಿಮಯಗಳ ಜೊತೆ ನಮ್ಮ ಸಂಘದ ಸರ್ವ ಸದಸ್ಯರ ಸಭೆ ಕರೆಯಲಾಗಿದ್ದು ಎಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ತಮ್ಮ ಅತ್ಯಮೂಲ್ಯವಾದ ಸಲಹೆಗಳನ್ನು ಕೊಟ್ಟು ನಮ್ಮ ಶಾಲೆಯ ಬೆಳ್ಳಿಹಬ್ಬ ಹಾಗೂ ನಮ್ಮ ಸಂಘದ ದಶಮಾನೋತ್ಸವ ಕಾರ್ಯಕ್ರಮಗಳು ಯಶಸ್ವಿಯಾಗಲು ಸಹಕರಿಸಬೇಕಾಗಿ ತಮ್ಮಲ್ಲಿ ಕಳಕಳಿಯ ವಿನಂತಿ. ಈ ಕೆಳಕಂಡ ವಿಷಯಗಳ ಬಗ್ಗೆ ಚರ್ಚಿಸಲಾಗುತ್ತದೆ. 1.ಹಳೆ ವಿದ್ಯಾರ್ಥಿಗಳು ನೀಡುವ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ಹಾಗೂ ಪಟ್ಟಿಯನ್ನು ಅಂತಿಮಗೊಳಿಸುವುದು. 2. ಹಳೆವಿದ್ಯಾರ್ಥಿಗಳ ಕೈಪಿಡಿ ಪುಸ್ತಕಕ್ಕೆ ಬರೆದ ಆರ್ಟಿಕಲ್ಸ್ ಅಂತಿಮಗೊಳಿಸುವುದು. 3. ಕೆಲವೊಂದು ಜವಾಬ್ದಾರಿಗಳನ್ನು ಹಂಚುವಿಕೆ. 4. ಹಾಗೂ ಇನ್ನಿತರ ವಿಷಯಗಳ ಬಗ್ಗೆ. ತುಂಬಾ ಜನ ಹಳೆ ವಿದ್ಯಾರ್ಥಿಗಳು ಈ ಗ್ರೂಪಿನಲ್ಲಿ ಇರುವುದಿಲ್ಲ ತಾವೆಲ್ಲರೂ ದಯಮಾಡಿ ಅವರಿಗೆಲ್ಲ ಮೀಟಿಂಗ್ ನ ವಿಷಯ ಹೇಳಿ ಅವರನ್ನು ಕೂಡ ನಿಮ್ಮ ಜೊತೆ ಮೀಟಿಂಗಿಗೆ ಕರೆದುಕೊಂಡು ಬರಬೇಕಾಗಿ ವಿನಂತಿ.
ಇಂತಿ ನಿಮ್ಮ ಅಧ್ಯಕ್ಷರು ಮತ್ತು ಸದಸ್ಯರು ಹಳೆ ವಿದ್ಯಾರ್ಥಿ ಸಂಘ